Quora ಏಕೆ ಅಸ್ತಿತ್ವದಲ್ಲಿದೆ

ಪ್ರಪಂಚದ ಜ್ಞಾನವನ್ನು ಹಂಚುವುದು ಮತ್ತು ಹೆಚ್ಚಿಸುವುದು Quoraದ ಗುರಿಯಾಗಿದೆ. ಬಹಳ ಜನರಿಗೆ ಅಮೂಲ್ಯವಾದಂತಹ ವ್ಯಾಪಕವಾದ ಜ್ಞಾನ ಪ್ರಸ್ತುತ ಕೆಲವರಿಗೆ ಮಾತ್ರ ಲಭ್ಯವಿದೆ — ಜನರ ತಲೆಗಳಲ್ಲಿ ಬಂಧಿಯಾಗಿ ಉಳಿದುಕೊಂಡಿದೆ ಅಥವಾ ಕೆಲವೇ ಆಯ್ದ ಗುಂಪುಗಳಿಗೆ ಮಾತ್ರ ಲಭ್ಯವಿದೆ. ಜ್ಞಾನ ಹೊಂದಿರುವ ಜನರನ್ನು ಜ್ಞಾನದ ಅಗತ್ಯವಿರುವ ಜನರೊಡನೆ ಸಂಪರ್ಕ ಕಲ್ಪಿಸುವುದು, ವಿಭಿನ್ನ ದೃಷ್ಟಿಕೋನವಿರುವ ಜನರನ್ನು ಒಟ್ಟಿಗೆ ತರುವುದು, ಇದರಿಂದ ಅವರು ಪರಸ್ಪರ ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು, ಮತ್ತು ಉಳಿದ ಜಗತ್ತಿನ ಲಾಭಕ್ಕಾಗಿ ಜ್ಞಾನವನ್ನು ಹಂಚಲು ಪ್ರತಿಯೊಬ್ಬರನ್ನು ಸಬಲೀಕರಿಸಲು ನಾವು ಬಯಸುತ್ತೇವೆ.

ಒಂದು ಪ್ರಶ್ನೆಯ ಸುತ್ತ ಒಟ್ಟುಗೂಡಿ

Quora ದ ಮುಖ್ಯ ಅಂಶವೆಂದರೆ ಪ್ರಶ್ನೆಗಳು — ಪ್ರಪಂಚಕ್ಕೆ ಪರಿಣಾಮಬೀರುವಂತಹ ಪ್ರಶ್ನೆಗಳು, ಪ್ರಪಂಚದ ಇತ್ತೀಚಿನ ಘಟನೆಗಳ ಕುರಿತು ವಿವರಿಸುವಂತಹ ಪ್ರಶ್ನೆಗಳು, ಪ್ರಮುಖ ಜೀವನದ ತೀರ್ಮಾನಗಳಿಗೆ ಮಾರ್ಗದರ್ಶನ ನೀಡುವಂತಹ ಪ್ರಶ್ನೆಗಳು ಮತ್ತು ಇತರ ಜನರು ವಿಭಿನ್ನವಾಗಿ ಏಕೆ ಭಾವಿಸುತ್ತಾರೆ ಎಂಬುದರ ಕುರಿತು ಒಳನೋಟಗಳನ್ನು ಒದಗಿಸುವಂತಹ ಪ್ರಶ್ನೆಗಳು. Quora ಎಂಬುದು ನೀವು ಪ್ರಶ್ನೆಗಳನ್ನು ಕೇಳಬಹುದಾದಂತಹ ಸ್ಥಳ ಮತ್ತು ನೀವು ಕಾಳಜಿವಹಿಸುವ ಮತ್ತು ಅಮೋಘವಾದ ಉತ್ತರಗಳನ್ನು ಪಡೆಯುವ ಸ್ಥಳವಾಗಿದೆ.

Quora ಪ್ರತಿ ಪ್ರಶ್ನೆಯ ಒಂದು ಆವೃತ್ತಿಯನ್ನು ಮಾತ್ರ ಹೊಂದಿರುತ್ತದೆ. ಇದು ಎಡಪಂಥೀಯ ಆವೃತ್ತಿ, ಬಲಪಂಥೀಯ ಆವೃತ್ತಿ, ಪಾಶ್ಚಾತ್ಯ ಆವೃತ್ತಿ ಮತ್ತು ಪೂರ್ವ ಆವೃತ್ತಿಯನ್ನು ಹೊಂದಿರುವುದಿಲ್ಲ. ಒಂದೇ ಪ್ರಶ್ನೆಗೆ, ಒಂದೇ ಸ್ಥಳದಲ್ಲಿ - ಮತ್ತು ಪರಸ್ಪರ ಕಲಿಯಲು Quora ಪ್ರಪಂಚದ ವಿವಿಧ ಜನರನ್ನು ಒಟ್ಟುಗೂಡಿಸುತ್ತದೆ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ಥಳವಾಗಿ Quora ಇರಬೇಕೆಂದು ನಾವು ಬಯಸುತ್ತೇವೆ ಏಕೆಂದರೆ ಚರ್ಚೆ ನಡೆಯುತ್ತಿರುವ ಸ್ಥಳ Quora ಆಗಿದೆ. Quoraದ ಉತ್ತರಗಳು ಎಲ್ಲರಿಗೂ ನಿರ್ಣಾಯಕವಾದ ಉತ್ತರವಾಗಬೇಕೆಂದು ನಾವು ಬಯಸುತ್ತೇವೆ.

ವಿಶ್ವ ಮತ್ತು ಅದರಲ್ಲಿರುವ ಜನರನ್ನು ಅರ್ಥಮಾಡಿಕೊಳ್ಳಿ

Quoraದಲ್ಲಿರುವ ವಿಷಯಗಳನ್ನು ಓದುವಾಗ ನೀವು ಖುಷಿಯಾಗುತ್ತೀರಿ. ಜಗತ್ತು ಯಾಕೆ ಈ ರೀತಿಯಲ್ಲಿಯೇ ಕೆಲಸ ಮಾಡುತ್ತದೆ, ಜನರು ಯಾಕೆ ಈ ರೀತಿಯಲ್ಲಿಯೇ ವರ್ತಿಸುತ್ತಾರೆ ಮತ್ತು ಜಗತ್ತನ್ನು ಉತ್ತಮಗೊಳಿಸಲು ನಾವೆಲ್ಲರೂ ಏನು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು Quora ನಿಮಗೆ ಸಹಾಯ ಮಾಡುತ್ತದೆ. ನೀವು ಕೇಳಬೇಕೆಂದಿರುವ, ನೀವು ಅರಿತುಕೊಂಡಿರದ ಪ್ರಶ್ನೆಗಳಿಗೆ ಒಳನೋಟವುಳ್ಳ ಉತ್ತರಗಳ ಒಂದು ವೈಯಕ್ತೀಕರಿಸಿದ ಫೀಡ್ ಅನ್ನು Quora ಒದಗಿಸುತ್ತದೆ.

Quora ದ ಉತ್ತರಗಳು ನಿಜವಾಗಿಯೂ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಹ ಜನರಿಂದ ಮತ್ತು ಮೊದಲ ಮಾಹಿತಿ ಹೊಂದಿರುವವರಿಂದ ಬರುತ್ತವೆ. Quora ಎಂಬುದು ಇರಾನ್ ವ್ಯವಹಾರದಲ್ಲಿ ಬರಾಕ್ ಒಬಾಮಾ, ಜೈಲಿನ ಜೀವನದಲ್ಲಿ ಖೈದಿಗಳು, ಜಾಗತಿಕ ತಾಪಮಾನ ಏರಿಕೆ ಕುರಿತು ವಿಜ್ಞಾನಿಗಳು, ಕಳ್ಳರನ್ನು ತಡೆಯುವುದು ಹೇಗೆ ಎಂಬ ಕುರಿತು ಪೊಲೀಸ್ ಅಧಿಕಾರಿಗಳು ಮತ್ತು ಟಿವಿ ತಯಾರಕರು ತಮ್ಮ ಕಾರ್ಯಕ್ರಮಗಳನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಓದುವ ಸ್ಥಳವಾಗಿದೆ. Quoraದಲ್ಲಿ ನಿಮಗೆ ಪ್ರೇರಣೆ ನೀಡುವಂತಹ ಗ್ಲೋರಿಯಾ ಸ್ಟೇನಿಮ್, ಸ್ಟೀಫನ್ ಫ್ರೈ, ಹಿಲರಿ ಕ್ಲಿಂಟನ್, ಗ್ಲೆನ್ ಬೆಕ್, ಶೆರ್ಲಿ ಸ್ಯಾಂಡ್‌ಬೆರ್ಗ್, ವಿನೋದ್ ಖೋಸ್ಲಾ ಮತ್ತು ಗಿಲ್ಲಿಯನ್ ಆಂಡರ್ಸನ್ ರಂತಹವರು ಜನರು ಕೇಳುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಾರೆ. Quora ಪ್ರಮುಖ ಒಳನೋಟಗಳನ್ನು ಎಂದಿಗೂ ಬೇರೆಲ್ಲಿಯೂ ಹಂಚಿಕೊಳ್ಳದಿರುವ, ನೀವು ಎಂದಿಗೂ ಯಾವುದೇ ಪ್ರಕಾರವಾಗಿ ತಲುಪಲು ಸಾಧ್ಯವಾಗದೆ ಇರುವಂತಹ ಜನರಿಂದ ಉತ್ತರಗಳನ್ನು ಪಡೆಯಬಹುದಾದ ಜಾಗವಾಗಿದೆ.